ಭಗವಾನ್ ಶ್ರೀ ನಾರಾಯಣ ಗುರುಗಳ ದಿವ್ಯ ಆಶೀರ್ವಾದದೊಂದಿಗೆ, ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿಯಲ್ಲಿ ಮಹಾಗುರುವಿನ ದಿವ್ಯ ಸಾನಿಧ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಆರ್ಟ್, ಮಂಗಳೂರು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಅನ್ನು ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳು, ಶ್ರೀ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್®ನ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಡಾ. ಶ್ರೀ ಎಸ್. ರಾಮಪ್ಪಜೀ ಅವರ ಶುಭಹಸ್ತಗಳಿಂದ ಸಿಗಂದೂರು ಪರಮಪವಿತ್ರ ಕ್ಷೇತ್ರದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಸಿಗಂದೂರು ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರವಿಕುಮಾರ್ ಎಚ್.ಆರ್., ಸಾಗರ ಪಶುವೈದ್ಯಕೀಯ ನಾಮನಿರ್ದೇಶಕ ಸದಸ್ಯರಾದ ಶ್ರೀ ಜಾಕಿ ಗಣೇಶ್, ಶ್ರೀ ರಾಘವೇಂದ್ರ ಬೆಳಮಕ್ಕಿ, ಶ್ರೀ ಚಂದ್ರಪ್ಪ ಮಾಸ್ಟರ್ (ಅಳೂರು) ಹಾಗೂ ಕ್ಷೇತ್ರದ ಮ್ಯಾನೇಜರ್ ಶ್ರೀ ಪ್ರಕಾಶ್ ಉಪಸ್ಥಿತರಿದ್ದರು.
ಈ ವೆಬ್‌ಸೈಟ್ ಮೂಲಕ ಚಿತ್ರಕಲಾ ಶಿಕ್ಷಣ, ಚಿತ್ರಕಲಾ ತರಬೇತಿ, ಸ್ಪರ್ಧೆಗಳು, ಪ್ರದರ್ಶನಗಳು, ಪ್ರಮಾಣಪತ್ರಗಳು ಹಾಗೂ ಸಂಸ್ಥೆಯ ವಿವಿಧ ಕಲಾ ಚಟುವಟಿಕೆಗಳ ಮಾಹಿತಿಯನ್ನು ಎಲ್ಲರಿಗೂ ಸುಲಭವಾಗಿ ತಲುಪಿಸುವ ಮಹತ್ವದ ಹೆಜ್ಜೆಯನ್ನು ಇಡಲಾಗಿದೆ.
ಈ ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರ ಮತ್ತು ಶುಭಹಾರೈಕೆಗಳನ್ನು ಹೃತ್ಪೂರ್ವಕವಾಗಿ ಕೋರುತ್ತೇವೆ.
ವಿಶೇಷ ಧನ್ಯವಾದಗಳು
ಶ್ರೀ ಸಿಗಂದೂರು ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರವಿಕುಮಾರ್ ಎಚ್.ಆರ್. ಹಾಗೂ ಶ್ರೀ ಚಂದ್ರಪ್ಪ ಮಾಸ್ಟರ್ (ಅಳೂರು) ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು.
ಸುರೇಶ್ ಕೆ. ಪಾಂಡವರಕಲ್ಲು
ಸಂಸ್ಥಾಪಕರು ಮತ್ತು ನಿರ್ದೇಶಕರು
ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಆರ್ಟ್, ಮಂಗಳೂರು
ಮೊಬೈಲ್: 9483024279 / 9448549279
"ಕಲೆ ಎಲ್ಲರಿಗಾಗಿ – ಪ್ರತಿಭೆಗೆ ಯಾವುದೇ ಗಡಿಗಳಿಲ್ಲ."